ಕನ್ನಡ ಚಿತ್ರಗಳ ಕನಸುಗಾರ, ರಸಿಕ, ಒಂಟಿ ಸಲಗ, ಛಲ ಬಿಡದ ತ್ರಿವಿಕ್ರಮ, ಕ್ರೇಜಿಸ್ಟಾರ್, ದಿ ಶೋ ಮ್ಯಾನ್ ಖ್ಯಾತಿಯ ವೀರಾಸ್ವಾಮಿ ರವಿಚಂದ್ರನ್ ಫೇಸ್‌ಬುಕ್‌ಗೆ ಲಗ್ಗೆ ಹಾಕಿದ್ದಾರೆ. ಕ್ರೇಜಿ ಸ್ಟಾರ್ ಅಭಿಮಾನಿಗಳಿಗೆ ಈ ಮೂಲಕ ಅವರು ಇನ್ನಷ್ಟು ಹತ್ತಿರವಾಗಿದ್ದಾರೆ. 

ಫೇಸ್‌ಬುಕ್‌ನಲ್ಲಿ ರವಿಚಂದ್ರನ್ ಕನಸುಗಳು, ಅವರ ವೈಯಕ್ತಿಕ ವಿವರಗಳು, ಪ್ರಶಸ್ತಿ ಪುರಸ್ಕಾರಗಳನ್ನು ಕಾಣಬಹುದು. ತಮ್ಮ ಬಾಳ ಪಯಣದಲ್ಲಿ ಈಗಾಗಲೆ ಅರ್ಧ ಸೆಂಚುರಿ ಬಾರಿಸಿರುವ ಕ್ರೇಜಿಸ್ಟಾರ್ ತಮ್ಮ ಪುತ್ರ ಮನೋರಂಜನ್ ಅವರನ್ನು ಬೆಳ್ಳಿತೆರೆಗೆ ಪರಿಚಯಿಸುವ ಸಿದ್ಧತೆಯಲ್ಲೂ ಇದ್ದಾರೆ. 

ಹಿಂದಿ ಚಿತ್ರರಂಗಕ್ಕೆ ರಾಜ್ ಕಪೂರ್ ಹೇಗೋ ಕನ್ನಡಕ್ಕೆ ರವಿಚಂದ್ರನ್ ಹಾಗೆ. ಕನ್ನಡ ಚಿತ್ರರಂಗಕ್ಕೆ ರವಿಚಂದ್ರನ್ ನೀಡುರುವ ಕೊಡುಗೆಗಳಲ್ಲಿ ಹೊಸ ಅಲೆಯ ಸಂಗೀತ ಝಲಕ್ ಗಮನಾರ್ಹವಾದುದು. ಈಗಾಗಲೆ ಫೇಸ್‌ಬುಕ್‌ನಲ್ಲಿ ಕನ್ನಡದ ಹಲವಾರು ಸಿನೆಮಾ ತಾರೆಗಳಿದ್ದಾರೆ. ಇವರಲ್ಲಿ ಹೊಸ ಪೀಳಿಗೆಯ ತಾರೆಗಳೇ ಅಧಿಕ. 

ಫೇಸ್‌ಬುಕ್‌ಗೆ ಬರಲು ಹಳೆಯ ಪೀಳಿಗೆಯ ತಾರೆಗಳು ಯಾಕೋ ಏನೋ ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ. ಇಂತಹ ಸಂದರ್ಭದಲ್ಲಿ ಹಳೆಯ ಮತ್ತು ಹೊಸ ಪೀಳಿಗೆಯ ಕೊಂಡಿಯಂತಿರುವ ರವಿಚಂದ್ರನ್ ಫೇಸ್‌ಬುಕ್‌ಗೆ ಬಂದಿರುವುದು ಗಮನಾರ್ಹ ಬೆಳವಣಿಗೆ. ಫೇಸ್‌ಬುಕ್‌ನಲ್ಲಿ ರವಿಚಂದ್ರನ್ ಅವರನ್ನು ನೀವೂ ಬರಮಾಡಿಕೊಳ್ಳಿ. (ಒನ್‌ಇಂಡಿಯಾ ಕನ್ನಡ)

ನಮ್ಮ ಸಿನಿಪತ್ರಕರ್ತರಿಗೆ ಕ್ರೇಜಿಸ್ಟಾರ್ ರವಿಚಂದ್ರನ್ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ. 

ಪ್ರ : ಸಿನಿಮಾ ಮಂದಿ ದಿನಕ್ಕೊಬ್ಬರಂತೆ ರಾಜಕೀಯ ಪ್ರವೇಶ ಮಾಡುತ್ತಿದ್ದಾರೆ. ನೀವು ಯಾಕೆ ಒಂದು ಕೈ ನೋಡಬಾರದು?
ರವಿ: ಇಲ್ಲಿ ಇರುವ ಅಸೋಷಿಯೇಶನ್ ಬಿಕ್ಕಟ್ಟು ಬಗೆಹರಿಸಲು ಆಗದವರು ಅಲ್ಲಿ ಹೋಗಿ ಹೋಗಿ ಏನು ಮಾಡಲು ಸಾಧ್ಯ. ಇಲ್ಲೇ ಬೆಟ್ಟದಷ್ಟು ಕೆಲಸವಿದೆ. ಇನ್ನು ರಾಜಕೀಯಕ್ಕೆ ಹೋಗಿ ಏನು ಮಾಡಲಿ. ಇಲ್ಲಿದ್ದು ಜಯಿಸಲಾಗದವನು ಅಲ್ಲೆಲ್ಲೋ ಹೋಗಿ ಏನು ಮಾಡಲು ಸಾಧ್ಯ.

ಪ್ರ : ಹಾಗಾದರೆ ಈಗ ಹೋಗಿ 'ಕೈ' ಜೋಡಿಸಿದವರಿಗೆ ಏನು ಹೇಳಲು ಬಯಸುತ್ತೀರಿ?
ರವಿ: ಕೈ ಬೇಕಾದರೂ ಜೋಡಿಸಲಿ, ಹೊರೆ ಬೇಕಾದರೂ ಹೊರಲಿ. ಆದರೆ ಹೆಸರು ತಂದುಕೊಟ್ಟ ಚಿತ್ರೋದ್ಯಮವನ್ನು ಮೆರೆಯದಿದ್ದರೆ ಸಾಕು.

ಪ್ರ : ಯಾವ ಪಕ್ಷವಾದರೂ ನಿಮಗೆ ಆಫರ್ ಕೊಟ್ಟಿದ್ದಾರಾ?
ರವಿ: ಆಫರ್ ಕೊಡೋಕೆ ಅವರ್ಯಾರು? ರಾಜಕೀಯ ಮಾಡುವುದಿದ್ದರೆ ಇಂದಲ್ಲ ಎಂದೋ ಮಾಡುತ್ತಿದ್ದೆ. ರವಿಚಂದ್ರನ್ ಅಂದರೆ ಸಿನಿಮಾ, ಸಿನಿಮಾ ಅಂದ್ರೆ ರವಿಚಂದ್ರನ್.

ಪ್ರ : ನಿಮ್ಮ ಸಿನಿಮಾಯಾನದ ಬಗ್ಗೆ?
ರವಿ: ದಶಮುಖ ರೆಡಿಯಾಗುತ್ತಿದೆ. ನರಸಿಂಹ ಇದೇ ತಿಂಗಳು 23ಕ್ಕೆ ಬಿಡುಗಡೆಯಾಗುತ್ತಿದೆ. ಕ್ರೇಜಿಲೋಕ ಮುಂದಿನ ತಿಂಗಳು. ಪರಮಶಿವ ಶೂಟಿಂಗ್ ಬ್ಯಾಲನ್ಸ್ ಇದೆ. ಅವನೊಬ್ಬ ಅಣಜಿ ನಾಗಾರಾಜ್ 3 -4 ತಿಂಗಳಿಗೊಮ್ಮೆ ಭೀಮಾತೀರದಿಂದ ನಮ್ಮ ತೀರಕ್ಕೆ ಬರುತ್ತಾನೆ. ಶೂಟಿಂಗ್ ಮಾಡಿಸುತ್ತಾನೆ. ಮತ್ತೆ ಕಣ್ಮರೆಯಾಗುತ್ತಾನೆ. 

ಪ್ರ : ನಿಮ್ಮ ಮಹತ್ವಾಕಾಂಕ್ಷೆಯ ಮಂಜಿನಹನಿ ಬಗ್ಗೆ?
ರವಿ: ಇನ್ನು ಆರು ತಿಂಗಳಲ್ಲಿ ರೆಡಿಯಾಗುತ್ತೆ. ಚಿತ್ರದ ಮೊದಲ 20 ನಿಮಿಷ ಗ್ರಾಫಿಕ್ ಇರುವುದರಿಂದ ಆದರೆ ಕೆಲಸ ಭರದಿಂದ ಸಾಗುತ್ತಿದೆ. ಆ ಸಿನಿಮಾ ಖಂಡಿತ ಮ್ಯಾಜಿಕ್ ಮಾಡುತ್ತೆ.

ಪ್ರ : ನಿಮ್ಮ ಮಗನನ್ನು ಚಿತ್ರರಂಗಕ್ಕೆ ಪರಿಚಯಿಸುವ ವಿಚಾರ?
ರವಿ: ಇನ್ನು ನಾಲ್ಕು ತಿಂಗಳೊಳಗಾಗಿ ಬರ್ತಾನೆ. ಡೈಲಾಗ್ ಡೆಲಿವರಿ ಹೇಗೆ ಮಾಡಬೇಕು ಅನ್ನೋದನ್ನಾ ಕಲೀತಾ ಇದ್ದಾನೆ. ಎಲ್ಲಾ ರಂಗದಲ್ಲೂ ಪರ್ಫೆಕ್ಟ್ ಆಗಿರಲಿ ಎನ್ನೋದು ನನ್ನ ಉದ್ದೇಶ.

ಪ್ರ : ತಮ್ಮ ಬಾಲಾಜಿ ಕಥೆಯ ಏನಾಯಿತು?
ರವಿ: ಅವನಿಗೆ ಸಿನಿಮಾ ಬಗ್ಗೆ ಇಂಟರೆಸ್ಟ್ ಕಮ್ಮಿ ಆದಂತಿದೆ. ನನಗೆ ನನ್ನ ಮಗನ, ಮಂಜಿನ ಹನಿ, ನಿರ್ಮಾಪಕರ ಸಿನಿಮಾಗಳ ಬಗ್ಗೆ ತಲೆ ಕೆಡಿಸಿಕೊಳ್ಳುವಷ್ಟು ಟೈಮ್ ಇಲ್ಲದಿರುವಾಗ... ಪ್ಲೀಸ್ ಬೇರೆ ವಿಷಯ ಮಾತಾಡಿ..

ಕನ್ನಡ ಸಿನಿಮಾ ತಾರೆಗಳು ಒಬ್ಬೊಬ್ಬರೇ ರಾಜಕೀಯಕ್ಕೆ ಧುಮುಕುತ್ತಿದ್ದಾರೆ. ರಮ್ಯಾ, ಪೂಜಾಗಾಂಧಿ, ಭಾವನಾ, ಮಾಳವಿಕಾ, ಜಗ್ಗೇಶ್ ಹೀಗೆ ಪಟ್ಟಿ ಬೆಳೆಯುತ್ತಲೇ ಇದೆ. ಕ್ರೇಜಿಸ್ಟಾರ್ ರವಿಚಂದ್ರನ್ ಕೂಡ ರಾಜಕೀಯಕ್ಕೆ ಧುಮುಕುತ್ತಾರಾ? ಎಂಬ ಪ್ರಶ್ನೆ ಅವರ ಅಭಿಮಾನಿಗಳು ಹಾಗೂ ಚಿತ್ರೋದ್ಯಮದಲ್ಲಿ ಸಖತ್ ಗದ್ದಲ ಎಬ್ಬಿಸಿದೆ. 

ಈಗ ರವಿಚಂದ್ರನ್ ಸಾಕಷ್ಟು ಮಾಗಿದ ಕಲಾವಿದ. ರಾಜಕೀಯಕ್ಕೆ ಪಾದಾರ್ಪಣೆ ಮಾಡಲು ಸೂಕ್ತ ಸಮಯ. ಆದರೆ ರವಿಮಾಮ ಮಾತ್ರ ರಾಜಕೀಯ ಒಲ್ಲೆ ಎನ್ನುತ್ತಿದ್ದಾರೆ. ಇತ್ತೀಚೆಗೆ ತೆರೆಕಂಡ 'ನರಸಿಂಹ' ಚಿತ್ರದಲ್ಲಿ ರವಿಚಂದ್ರನ್ ಮತ್ತೊಮ್ಮೆ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. ಬಾಕ್ಸಾಫೀಸನ್ನು 'ನರಸಿಂಹ' ಚಂಡಾಡಿದ್ದಾನೆ.

ರಾಜಕೀಯ ಎಂಟ್ರಿ ಬಗ್ಗೆ ಮೌನ ಮುರಿದಿರುವ ರವಿಚಂದ್ರನ್, "ಮೂಗಿನ ನೇರಕ್ಕೆ ಮಾತನಾಡುವವರು ರಾಜಕೀಯ ಕ್ಷೇತ್ರದಲ್ಲಿ ಮೇಲೆ ಬರಲು ಸಾಧ್ಯವಿಲ್ಲ. ಹಾಗೆಂದು ತಾವು ತಮ್ಮ ನೈಜ ಸ್ವಭಾವವನ್ನು ಬದಲಾಯಿಸಿಕೊಳ್ಳಲು ಸಾಧ್ಯವಿಲ್ಲ" ಎಂದು ಮಾರ್ಮಿಕವಾಗಿ ನುಡಿದ್ದಾರೆ.

ಯಾರೋ ಹೇಳಿದ್ದನ್ನು ಕೇಳುವ ಸ್ವಭಾವ ನನ್ನದಲ್ಲ. ನನಗೆ ಒಳ್ಳೆಯದು ಅನ್ನಿಸಿದ್ದನ್ನು ಮಾಡವ ಸ್ವಭಾವ ನನ್ನದು. ರಾಜಕೀಯದಲ್ಲಿ ಇವೆಲ್ಲಾ ಸಾಧ್ಯವೆ? ಆರೋಪ ಪ್ರತ್ಯಾರೋಪಗಳಲ್ಲೇ ಕಾಲ ಕಳೆದುಹೋಗುತ್ತದೆ. ಸಮಯ ವ್ಯರ್ಥವಾಗುತ್ತದಷ್ಟೇ ಹೊರತು ನಯಾಪೈಸೆ ಪ್ರಯೋಜನವಿಲ್ಲ. 

ಅದಕ್ಕಾಗಿಯೇ ನನಗೂ ರಾಜಕೀಯಕ್ಕೂ ಸರಿಬರಲ್ಲ. ನನ್ನನ್ನು ಇಷ್ಟು ದೊಡ್ಡವನನ್ನಾಗಿ ಮಾಡಿದ ಚಿತ್ರರಂಗದಲ್ಲೇ ಬೆಳೆಯುತ್ತೇನೆ. ರಾಜಕೀಯ ಇವೆಲ್ಲಾ ನನಗೆ ಆಗಲ್ಲ ಎಂದು ಕಡ್ಡಿಮುರಿದಂತೆ ಹೇಳಿದ್ದಾರೆ. ಉಳಿದ ತಾರೆಗಳು ರವಿಚಂದ್ರನ್ ಅವರನ್ನು ಅರ್ಥ ಮಾಡಿಕೊಳ್ಳುವುದು ತುಂಬಾನೇ ಕಷ್ಟ. (ಒನ್‌ಇಂಡಿಯಾ ಕನ್ನಡ)

ಬೆಂಗಳೂರು, ಮಾ.28: ಬಜೆಟ್ 2012 ನಾಡಿನ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದೆಯೇ? ಅಥವಾ ಸುಧಾರಣೆಗಳನ್ನು ಕಡೆಗಾಣಿಸಿದೆಯೇ? ಎಂ ವಿಷಯವಾಗಿ ISECಯ ನಿರ್ದೇಶಕ ಡಾ ಆರ್ ಎಸ್ ದೇಶಪಾಂಡೆ ಅವರೊಡನೆ ಸಂವಾದವನ್ನು CESS ಏರ್ಪಡಿಸಿದೆ.

Center for Educational and Social Studies (CESS) ಭಾಗವಾಗಿರುವ ಜಿಜ್ಞಾಸ ಸಂಸ್ಥೆ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ Institute for Social and Economic Change(ISEC)ನ ನಿರ್ದೇಶಕ ದೇಶಪಾಂಡೆ ಅವರು ಉಪನ್ಯಾಸ ನೀಡಲಿದ್ದಾರೆ. ನಂತರ ಸಂವಾದ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಪಿವಿ ಕೃಷ್ಣಭಟ್ಟ ಅವರು ವಹಿಸಿಕೊಳ್ಳಲಿದ್ದಾರೆ.

ದಿನಾಂಕ: ಮಾ.31, ಶನಿವಾರ
ಸಮಯ: 4 ಗಂಟೆ
ಸ್ಥಳ: ಮಿಥಿಕ್ ಸೊಸೈಟಿ, ಯವನಿಕಾ ಆಡಿಟೋರಿಯಂ ಎದುರು ನೃಪತುಂಗ ರಸ್ತೆ, ಬೆಂಗಳೂರು

ಜಿಜ್ಞಾಸ ಹಾಗೂ CESS ಬಗ್ಗೆ : ಜಿಜ್ಞಾಸ ಎಂದರೆ ಸಂಸ್ಕೃತದಲ್ಲಿ ವಿಚಾರಣೆ, ಚರ್ಚೆ ಎಂದಾಗುತ್ತದೆ. CESS ಅಡಿಯಲ್ಲಿರುವ ಜಿಜ್ಞಾಸ ಮೂಲಕ ಜ್ಞಾನಾರ್ಥಿಗಳನ್ನು ಪ್ರೋತ್ಸಾಹಿಸುವುದು ಸಂಸ್ಥೆಯ ಮೂಲ ಉದ್ದೇಶ.

ಭಾರತ ಬರೀ ದೇಶವಲ್ಲ, ಸಮಸ್ತ ನಾಗರೀಕ ಸಮಾಜ. ನಾಗರೀಕ ಸಮಾಜದಲ್ಲಿ ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೆ. ಹಳೆ ಕಂದಾಚಾರಗಳು ಹೊಸ ನಿಯಮಗಳನ್ನು ಪ್ರಶ್ನಿಸದೇ ಒಪ್ಪಿಕೊಳ್ಳಬಾರದು ಎಂಬುದು ನಮ್ಮ ಉದ್ದೇಶ.

ನಮ್ಮ ನಾಗರೀಕತೆ ಧರ್ಮದ ನೆಲೆಗಟ್ಟಿನ ಮೇಲೆ ನಿಂತಿದೆ. ನಮ್ಮ ಧರ್ಮ ಹಾಗೂ ಕಾನೂನು ವಿಶ್ವಕ್ಕೆ ಮಾದರಿಯಾಗಿದೆ. ವಿಜ್ಞಾನದ ತಳಹದಿಯ ಮೇಲೆ ಶೈಕ್ಷಣಿಕ ಹಾಗೂ ಸಾಮಾಜಿಕ ಸಮಸ್ಯೆಗಳತ್ತ CESS ಗಮನ ಹರಿಸುತ್ತದೆ.